আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

পৃষ্ঠা নং:close

external-link copy
23 : 45

اَفَرَءَیْتَ مَنِ اتَّخَذَ اِلٰهَهٗ هَوٰىهُ وَاَضَلَّهُ اللّٰهُ عَلٰی عِلْمٍ وَّخَتَمَ عَلٰی سَمْعِهٖ وَقَلْبِهٖ وَجَعَلَ عَلٰی بَصَرِهٖ غِشٰوَةً ؕ— فَمَنْ یَّهْدِیْهِ مِنْ بَعْدِ اللّٰهِ ؕ— اَفَلَا تَذَكَّرُوْنَ ۟

ತನ್ನ ಸ್ವೇಚ್ಛೆಯನ್ನು ತನ್ನ ಆರಾಧ್ಯನನ್ನಾಗಿ ಮಾಡಿಕೊಂಡವನನ್ನೂ ನೀವು ಕಂಡಿರಾ? ಅವನು ಸತ್ಯವನ್ನು ಅರಿತುಕೊಂಡ ಬಳಿಕವೂ ಅಲ್ಲಾಹನು ಅವನನ್ನು ದಾರಿ ತಪ್ಪಿಸಿದನು ಅವನ ಕಿವಿ ಹಾಗೂ ಅವನ ಹೃದಯದ ಮೇಲೆ ಮುದ್ರೆಯೊತ್ತಿ ಬಿಟ್ಟನು ಮತ್ತು ಅವನ ದೃಷ್ಟಿಯ ಮೇಲೂ ತೆರೆಯನ್ನು ಎಳೆದು ಬಿಟ್ಟನು. ಇಂತಹ ವ್ಯಕ್ತಿಗೆ ಅಲ್ಲಾಹನ ನಂತರ ಸನ್ಮಾರ್ಗ ನೀಡುವವನು ಯಾರಿದ್ದಾನೆ? ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ? info
التفاسير:

external-link copy
24 : 45

وَقَالُوْا مَا هِیَ اِلَّا حَیَاتُنَا الدُّنْیَا نَمُوْتُ وَنَحْیَا وَمَا یُهْلِكُنَاۤ اِلَّا الدَّهْرُ ۚ— وَمَا لَهُمْ بِذٰلِكَ مِنْ عِلْمٍ ۚ— اِنْ هُمْ اِلَّا یَظُنُّوْنَ ۟

ಅವರು ಹೇಳುತ್ತಾರೆ: ನಮಗೆ ಇಹಲೋಕ ಜೀವನದ ಹೊರತು ಬೇರೆ ಜೀವನವಿಲ್ಲ. ನಾವು ಸಾಯುತ್ತೇವೆ. ಬದುಕುತ್ತೇವೆ ಮತ್ತು ನಮ್ಮನ್ನು ಕಾಲವೇ ನಾಶಗೊಳಿಸುತ್ತದೆ. ವಸ್ತುತಃ ಅವರಿಗೆ ಇದರ ಕುರಿತು ಯಾವ ಜ್ಞಾನವು ಇಲ್ಲ. ಅವರು ಕೇವಲ ಊಹಿಸುತ್ತಿದ್ದಾರೆ ಅಷ್ಟೇ. info
التفاسير:

external-link copy
25 : 45

وَاِذَا تُتْلٰی عَلَیْهِمْ اٰیٰتُنَا بَیِّنٰتٍ مَّا كَانَ حُجَّتَهُمْ اِلَّاۤ اَنْ قَالُوا ائْتُوْا بِاٰبَآىِٕنَاۤ اِنْ كُنْتُمْ صٰدِقِیْنَ ۟

ಅವರ ಮುಂದೆ ನಮ್ಮ ಸುವ್ಯಕ್ತ ಸೂಕ್ತಿಗಳನ್ನು ಓದಿ ಹೇಳಲಾದಾಗ “ನೀವು ಸತ್ಯವಂತರಾಗಿದ್ದರೆ ನಮ್ಮ ಪೂರ್ವಜರನ್ನು ಎಬ್ಬಿಸಿ ತನ್ನಿರಿ ಎಂದು ಹೇಳುವುದರ ಹೊರತು ಅವರಿಗೆ ಇನ್ನಾವ ಆಧಾರವೂ ಇರಲಿಲ್ಲ. info
التفاسير:

external-link copy
26 : 45

قُلِ اللّٰهُ یُحْیِیْكُمْ ثُمَّ یُمِیْتُكُمْ ثُمَّ یَجْمَعُكُمْ اِلٰی یَوْمِ الْقِیٰمَةِ لَا رَیْبَ فِیْهِ وَلٰكِنَّ اَكْثَرَ النَّاسِ لَا یَعْلَمُوْنَ ۟۠

ಹೇಳಿರಿ: ಅಲ್ಲಾಹನೇ ನಿಮ್ಮನ್ನು ಜೀವಂತಗೊಳಿಸುತ್ತಾನೆ. ಆ ನಂತರ ನಿಮ್ಮನ್ನು ಮರಣಗೊಳಿಸುತ್ತಾನೆ. ಆ ಬಳಿಕ ಬರಲಿರುವ ಪುನರುತ್ಥಾನ ದಿನದಂದು ಅವನು ನಿಮ್ಮನ್ನು ಒಟ್ಟುಗೂಡಿಸುವನು. ಆದರೆ ಹೆಚ್ಚಿನ ಜನರು ತಿಳಿಯುವುದಿಲ್ಲ. info
التفاسير:

external-link copy
27 : 45

وَلِلّٰهِ مُلْكُ السَّمٰوٰتِ وَالْاَرْضِ ؕ— وَیَوْمَ تَقُوْمُ السَّاعَةُ یَوْمَىِٕذٍ یَّخْسَرُ الْمُبْطِلُوْنَ ۟

ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ. ಅಂತ್ಯಗಳಿಗೆಯು ಬರುವ ದಿನ ಮಿಥ್ಯವಾದಿಗಳು ನಷ್ಟಕ್ಕೊಳಗಾಗುವರು. info
التفاسير:

external-link copy
28 : 45

وَتَرٰی كُلَّ اُمَّةٍ جَاثِیَةً ۫ؕ— كُلُّ اُمَّةٍ تُدْعٰۤی اِلٰی كِتٰبِهَا ؕ— اَلْیَوْمَ تُجْزَوْنَ مَا كُنْتُمْ تَعْمَلُوْنَ ۟

ಆಗ ಪ್ರತಿಯೊಂದು ಸಮುದಾಯವನ್ನು ಮೊಣಕಾಲೂರಿರುವುದಾಗಿ ನೀವು ಕಾಣುವಿರಿ. ಪ್ರತಿಯೊಂದು ಸಮುದಾಯವೂ ತನ್ನ ಕರ್ಮ ಗ್ರಂಥದೆಡೆಗೆ ಕರೆಯಲ್ಪಡುವುದು. ಇಂದು ನಿಮಗೆ ನಿಮ್ಮ ಕೃತ್ಯಗಳ ಪ್ರತಿಫಲವನ್ನು ನೀಡಲಾಗುವುದು. info
التفاسير:

external-link copy
29 : 45

هٰذَا كِتٰبُنَا یَنْطِقُ عَلَیْكُمْ بِالْحَقِّ ؕ— اِنَّا كُنَّا نَسْتَنْسِخُ مَا كُنْتُمْ تَعْمَلُوْنَ ۟

ಇದು ನಮ್ಮ ಗ್ರಂಥವಾಗಿದೆ. ನಿಮ್ಮ ಕುರಿತು ಇದು ಸತ್ಯವನ್ನು ನುಡಿಯುತ್ತದೆ. ನಿಜವಾಗಿಯು ನೀವು ಮಾಡುತ್ತಿದ್ದುದನ್ನು ನಾವು ಬರೆಸಿ ದಾಖಲಿಸಿದ್ದೆವು info
التفاسير:

external-link copy
30 : 45

فَاَمَّا الَّذِیْنَ اٰمَنُوْا وَعَمِلُوا الصّٰلِحٰتِ فَیُدْخِلُهُمْ رَبُّهُمْ فِیْ رَحْمَتِهٖ ؕ— ذٰلِكَ هُوَ الْفَوْزُ الْمُبِیْنُ ۟

ಆದ್ದರಿಂದ ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡಿರುವವರನ್ನು ಅವರ ಪ್ರಭುವು ತನ್ನ ಕೃಪೆಯೊಳಗೆ ಪ್ರವೇಶಗೊಳಿಸುವನು. ಇದುವೇ ಸುಸ್ಪಷ್ಟ ಯಶಸ್ಸಾಗಿದೆ. info
التفاسير:

external-link copy
31 : 45

وَاَمَّا الَّذِیْنَ كَفَرُوْا ۫— اَفَلَمْ تَكُنْ اٰیٰتِیْ تُتْلٰی عَلَیْكُمْ فَاسْتَكْبَرْتُمْ وَكُنْتُمْ قَوْمًا مُّجْرِمِیْنَ ۟

ಆದರೆ ಸತ್ಯನಿಷೇಧಿಗಳೊಡನೆ (ಹೇಳಲಾಗುವುದು) ನಿಮಗೆ ನನ್ನ ಸೂಕ್ತಿಗಳನ್ನು ಓದಿ ಹೇಳಲಾಗುತ್ತಿರಲಿಲ್ಲವೇ? ಹಾಗಿದ್ದೂ ನೀವು ದರ್ಪತೋರುತ್ತಿದ್ದಿರಿ ಮತ್ತು ನೀವು ಅಪರಾಧಿ ಜನಾಂಗವಾಗಿದ್ದಿರಿ. info
التفاسير:

external-link copy
32 : 45

وَاِذَا قِیْلَ اِنَّ وَعْدَ اللّٰهِ حَقٌّ وَّالسَّاعَةُ لَا رَیْبَ فِیْهَا قُلْتُمْ مَّا نَدْرِیْ مَا السَّاعَةُ ۙ— اِنْ نَّظُنُّ اِلَّا ظَنًّا وَّمَا نَحْنُ بِمُسْتَیْقِنِیْنَ ۟

ಅಲ್ಲಾಹನ ವಾಗ್ದಾನವು ಖಂಡಿತ ಸತ್ಯವಾಗಿದೆ ಮತ್ತು ಅಂತ್ಯಗಳಿಗೆಯಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾದಾಗ ಅಂತ್ಯಗಳಿಗೆಯೇನೆAಬುದು ನಮಗೆ ಗೊತ್ತಿಲ್ಲ. ಅದು ಬರೀ ಊಹೆ ಎಂದು ನಾವು ತಿಳಿಯುತ್ತೇವೆ. ಮತ್ತು ನಾವು ನಂಬುವವರಲ್ಲ ಎಂದು ನೀವು ಹೇಳುತ್ತಿದ್ದಿರಿ. info
التفاسير: