আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

ಫುಸ್ಸಿಲತ್

external-link copy
1 : 41

حٰمٓ ۟ۚ

ಹಾ-ಮೀಮ್ info
التفاسير:

external-link copy
2 : 41

تَنْزِیْلٌ مِّنَ الرَّحْمٰنِ الرَّحِیْمِ ۟ۚ

ಇದು ಪರಮದಯಾಮಯನು, ಕರುಣಾನಿಧಿಯು ಆದವನಕಡೆಯಿಂದ ಅವತೀರ್ಣಗೊಂಡಿದೆ. info
التفاسير:

external-link copy
3 : 41

كِتٰبٌ فُصِّلَتْ اٰیٰتُهٗ قُرْاٰنًا عَرَبِیًّا لِّقَوْمٍ یَّعْلَمُوْنَ ۟ۙ

ಇದು ಸೂಕ್ತಿಗಳನ್ನು ಸ್ಪಷ್ಟವಾಗಿ ವಿವರಿಸಲಾದ ಒಂದು ಗ್ರಂಥ, ಅರಿವುಳ್ಳ ಜನರಿಗೆ ಅರಬೀ ಭಾಷೆಯಲ್ಲಿ ಪಾರಾಯಣ ಮಾಡುವ ಗ್ರಂಥ. info
التفاسير:

external-link copy
4 : 41

بَشِیْرًا وَّنَذِیْرًا ۚ— فَاَعْرَضَ اَكْثَرُهُمْ فَهُمْ لَا یَسْمَعُوْنَ ۟

ಸುವಾರ್ತೆ ಹಾಗು ಮುನ್ನೆಚ್ಚರಿಕೆ ನೀಡುವಗ್ರಂಥ. ಆದರೂಅವರ ಪೈಕಿ ಹೆಚ್ಚಿನವರು ವಿಮುಖರಾದರು. ಅವರು ಆಲಿಸುವುದಿಲ್ಲ. info
التفاسير:

external-link copy
5 : 41

وَقَالُوْا قُلُوْبُنَا فِیْۤ اَكِنَّةٍ مِّمَّا تَدْعُوْنَاۤ اِلَیْهِ وَفِیْۤ اٰذَانِنَا وَقْرٌ وَّمِنْ بَیْنِنَا وَبَیْنِكَ حِجَابٌ فَاعْمَلْ اِنَّنَا عٰمِلُوْنَ ۟

ಅವರು ಹೇಳುತ್ತಾರೆ: ನೀವು ಯಾವುದರೆಡೆಗೆ ನಮ್ಮನ್ನು ಅಹ್ವಾನಿಸುತ್ತಿರುವಿರೋ ಅದರ ಬಗ್ಗೆ ನಮ್ಮ ಹೃದಯಗಳು ಪರದೆಯಲ್ಲಿವೆ ಮತ್ತು ನಮ್ಮ ಕಿವಿಗಳು ಕಿವುಡಾಗಿದೆ ಹಾಗೂ ನಮ್ಮ ಮತ್ತು ನಿಮ್ಮ ನಡುವೆ ಒಂದು ತೆರೆ ಬಿದ್ದಿದೆ. ಆದ್ದರಿಂದ ನೀವು ನಿಮ್ಮಕಾರ್ಯವೆಸಗಿ, ಮತ್ತು ನಾವು ನಮ್ಮ ಕಾರ್ಯವೆಸಗುತ್ತೇವೆ. info
التفاسير:

external-link copy
6 : 41

قُلْ اِنَّمَاۤ اَنَا بَشَرٌ مِّثْلُكُمْ یُوْحٰۤی اِلَیَّ اَنَّمَاۤ اِلٰهُكُمْ اِلٰهٌ وَّاحِدٌ فَاسْتَقِیْمُوْۤا اِلَیْهِ وَاسْتَغْفِرُوْهُ ؕ— وَوَیْلٌ لِّلْمُشْرِكِیْنَ ۟ۙ

ಓ ಪ್ರವಾದಿಯವರೇ ಹೇಳಿರಿ: ನಾನು ನಿಮ್ಮಂತಹ ಒಬ್ಬ ಮನುಷ್ಯನಾಗಿದ್ದೇನೆ. ನಿಮ್ಮ ಆರಾಧ್ಯನು ಏಕೈಕ ಆರಾಧ್ಯನೆಂದು ನನ್ನೆಡೆಗೆ ದಿವ್ಯವಾಣಿ ಮಾಡಲಾಗುತ್ತದೆ. ಆದ್ದರಿಂದ ನೀವು ಅವನೆಡೆಗೆ ಸ್ಥಿರಚಿತ್ತರಾಗಿ ಅವನಲ್ಲಿ ಕ್ಷಮೆ ಬೇಡಿರಿ ಮತ್ತು ಬಹುದೇವಾರಾಧಕರಿಗೆ ಮಹಾನಾಶವಿದೆ. info
التفاسير:

external-link copy
7 : 41

الَّذِیْنَ لَا یُؤْتُوْنَ الزَّكٰوةَ وَهُمْ بِالْاٰخِرَةِ هُمْ كٰفِرُوْنَ ۟

ಅವರು ಝಕಾತ್" ನೀಡದವರು ಮತ್ತು ಪರಲೋಕವನ್ನು ನಿಷೇಧಿಸುವವರಾಗಿದ್ದಾರೆ. info
التفاسير:

external-link copy
8 : 41

اِنَّ الَّذِیْنَ اٰمَنُوْا وَعَمِلُوا الصّٰلِحٰتِ لَهُمْ اَجْرٌ غَیْرُ مَمْنُوْنٍ ۟۠

ಖಂಡಿತವಾಗಿಯು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಅನಂತ ಪ್ರತಿಫಲವಿದೆ. info
التفاسير:

external-link copy
9 : 41

قُلْ اَىِٕنَّكُمْ لَتَكْفُرُوْنَ بِالَّذِیْ خَلَقَ الْاَرْضَ فِیْ یَوْمَیْنِ وَتَجْعَلُوْنَ لَهٗۤ اَنْدَادًا ؕ— ذٰلِكَ رَبُّ الْعٰلَمِیْنَ ۟ۚ

ಹೇಳಿರಿ: ನೀವು ಭೂಮಿಯನ್ನು ಎರಡು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನನ್ನು ನಿರಾಕರಿಸುತ್ತಿದ್ದೀರಾ? ಹಾಗೂ ಇತರರನ್ನು ಅವನಿಗೆ ಸರಿಸಮಾನರನ್ನಾಗಿ ಕಲ್ಪಿಸುತ್ತಿದ್ದೀರಾ? ಅವನೇ ಸರ್ವಲೋಕಗಳ ಪಾಲಕ ಪ್ರಭು. info
التفاسير:

external-link copy
10 : 41

وَجَعَلَ فِیْهَا رَوَاسِیَ مِنْ فَوْقِهَا وَبٰرَكَ فِیْهَا وَقَدَّرَ فِیْهَاۤ اَقْوَاتَهَا فِیْۤ اَرْبَعَةِ اَیَّامٍ ؕ— سَوَآءً لِّلسَّآىِٕلِیْنَ ۟

ಅವನು ಭೂಮಿಯ ಮೇಲೆ ಪರ್ವತಗಳನ್ನು ನಾಟಿಬಿಟ್ಟನು. ಮತ್ತು ಅದರಲ್ಲಿ ಸಮೃದ್ಧಿಯನ್ನು ಇರಿಸಿದನು. ಹಾಗೂ ನಾಲ್ಕು ದಿನಗಳಲ್ಲಿ ಅಪೇಕ್ಷಕರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಅದರಲ್ಲಿ ಆಹಾರದ ವ್ಯವಸ್ಥೆಯನ್ನು ಮಾಡಿದನು. info
التفاسير:

external-link copy
11 : 41

ثُمَّ اسْتَوٰۤی اِلَی السَّمَآءِ وَهِیَ دُخَانٌ فَقَالَ لَهَا وَلِلْاَرْضِ ائْتِیَا طَوْعًا اَوْ كَرْهًا ؕ— قَالَتَاۤ اَتَیْنَا طَآىِٕعِیْنَ ۟

ಬಳಿಕ ಅವನು ಆಕಾಶದೆಡೆಗೆ ಗಮನಹರಿಸಿದನು ಅದು ಧೂಮವಾಗಿತ್ತು. ಆಗ ಅವನು(ಅಲ್ಲಾಹ್) ಅದಕ್ಕೂ, ಭೂಮಿಗೂ ಹೇಳಿದನು: ನೀವಿಬ್ಬರೂ ವಿಧೇಯರಾಗಿ ಇಲ್ಲವೇ ಅನಿವಾರ್ಯವಾಗಿ ಬಂದು ಬಿಡಿರಿ. ಅವೆರಡೂ ನಾವು ವಿಧೇಯರಾಗಿ ಬಂದೆವು ಎಂದು ಹೇಳಿದವು. info
التفاسير: