আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

পৃষ্ঠা নং:close

external-link copy
22 : 39

اَفَمَنْ شَرَحَ اللّٰهُ صَدْرَهٗ لِلْاِسْلَامِ فَهُوَ عَلٰی نُوْرٍ مِّنْ رَّبِّهٖ ؕ— فَوَیْلٌ لِّلْقٰسِیَةِ قُلُوْبُهُمْ مِّنْ ذِكْرِ اللّٰهِ ؕ— اُولٰٓىِٕكَ فِیْ ضَلٰلٍ مُّبِیْنٍ ۟

ಇನ್ನು ಅಲ್ಲಾಹನು ಯಾರ ಹೃದಯವನ್ನು ಇಸ್ಲಾಮಿಗೆಂದು ತೆÉರೆದಿರುವನೋ ಅವನು ತನ್ನ ಪ್ರಭುವಿನ ವತಿಯಿಂದ ಒಂದು ಪ್ರಕಾಶದಲ್ಲಿರುವನು ಮತ್ತÄ ಯಾರ ಹೃದಯಗಳು ಅಲ್ಲಾಹನ ಸ್ಮರಣೆಯಿಂದ ಕಠಿಣವಾಗಿವೆಯೋ ಅಂತಹವರಿಗೆ ವಿನಾಶವಿದೆ. ಇವರೇ ಸುಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿದ್ದಾರೆ. info
التفاسير:

external-link copy
23 : 39

اَللّٰهُ نَزَّلَ اَحْسَنَ الْحَدِیْثِ كِتٰبًا مُّتَشَابِهًا مَّثَانِیَ تَقْشَعِرُّ مِنْهُ جُلُوْدُ الَّذِیْنَ یَخْشَوْنَ رَبَّهُمْ ۚ— ثُمَّ تَلِیْنُ جُلُوْدُهُمْ وَقُلُوْبُهُمْ اِلٰی ذِكْرِ اللّٰهِ ؕ— ذٰلِكَ هُدَی اللّٰهِ یَهْدِیْ بِهٖ مَنْ یَّشَآءُ ؕ— وَمَنْ یُّضْلِلِ اللّٰهُ فَمَا لَهٗ مِنْ هَادٍ ۟

ಅಲ್ಲಾಹನು ಅತ್ಯುತ್ತಮ ವಚನವನ್ನು ಅವತೀರ್ಣಗೊಳಿಸಿದ್ದಾನೆ. ಅದು ಪರಸ್ಪರ ಸಾದೃಶ್ಯವಿರುವಂತಹ ಮತ್ತು ಪುನರಾವರ್ತಿಸಿ ಓದಲಾಗುವಂತಹ ಗ್ರಂಥವಾಗಿದೆ. ಅದರಿಂದಾಗಿ ತಮ್ಮ ಪ್ರಭುವನ್ನು ಭಯಪಟ್ಟುಕೊಳ್ಳುವವರ ರೋಮಗಳು ಸಟೆದು ನಿಲ್ಲುವುವು. ಕೊನೆಗೆ ಅವರ ಚರ್ಮಗಳು ಹಾಗೂ ಹೃದಯಗಳು ಅಲ್ಲಾಹನ ಸ್ಮರಣೆಯೆಡೆಗೆ ಮೃದುವಾಗಿ ಬಿಡುವುವು. ಇದು ಅಲ್ಲಾಹನ info

ಸನ್ಮಾರ್ಗವಾಗಿದೆ. ಅದರ ಮೂಲಕ ಅವನು ತಾನಿಚ್ಛಿಸಿದವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ ಮತ್ತು ಅಲ್ಲಾಹನು ಮಾರ್ಗಭ್ರಷ್ಟಗೊಳಿಸಿದವನಿಗೆ ಮಾರ್ಗದರ್ಶಕನಾರೂ ಇರಲಾರನು.

التفاسير:

external-link copy
24 : 39

اَفَمَنْ یَّتَّقِیْ بِوَجْهِهٖ سُوْٓءَ الْعَذَابِ یَوْمَ الْقِیٰمَةِ ؕ— وَقِیْلَ لِلظّٰلِمِیْنَ ذُوْقُوْا مَا كُنْتُمْ تَكْسِبُوْنَ ۟

ಪುನರುತ್ಧಾನದ ದಿನ ತನ್ನ ಮುಖವನ್ನು ನಿಕೃಷ್ಟ ಯಾತನೆಗೆ ಒಡ್ಡುವವನು (ಸ್ವರ್ಗವಾಸಿಗಳಿಗೆ ಸಮವಾಗುವನೇ) ನೀವು ನಿಮ್ಮ ಸಂಪಾದನೆಯ (ವಿಪತ್ತ)ನ್ನು ಸವಿಯಿರಿ ಎಂದು ಅಕ್ರಮಿಗಳೊಡನೆ ಹೇಳಲಾಗುವುದು. info
التفاسير:

external-link copy
25 : 39

كَذَّبَ الَّذِیْنَ مِنْ قَبْلِهِمْ فَاَتٰىهُمُ الْعَذَابُ مِنْ حَیْثُ لَا یَشْعُرُوْنَ ۟

ಇವರಿಗಿಂತ ಮುಂಚಿನವರು ಸಹ ಸುಳ್ಳಾಗಿಸಿದ್ದಾರೆ. ಅನಂತರ ಅವರು ಊಹಿಸದಿರದಂತಹ ಕಡೆಯಿಂದ ಅವರ ಮೇಲೆ ಯಾತನೆಯು ಬಂದೆರಗಿತು. info
التفاسير:

external-link copy
26 : 39

فَاَذَاقَهُمُ اللّٰهُ الْخِزْیَ فِی الْحَیٰوةِ الدُّنْیَا ۚ— وَلَعَذَابُ الْاٰخِرَةِ اَكْبَرُ ۘ— لَوْ كَانُوْا یَعْلَمُوْنَ ۟

ತರುವಾಯ ಅಲ್ಲಾಹನು ಅವರಿಗೆ ಇಹಲೋಕದಲ್ಲೇ ಅಪಮಾನದ ರುಚಿಯನ್ನು ಸವಿಸಿದನು ಮತ್ತು ಪರಲೋಕದ ಯಾತನೆಯು ಇದಕ್ಕಿಂತಲೂ ಹೆಚ್ಚು ಘೋರವಾದುದಾಗಿದೆ ಅವರು ಅರಿತುಕೊಳ್ಳುತ್ತಿದ್ದರೆ! info
التفاسير:

external-link copy
27 : 39

وَلَقَدْ ضَرَبْنَا لِلنَّاسِ فِیْ هٰذَا الْقُرْاٰنِ مِنْ كُلِّ مَثَلٍ لَّعَلَّهُمْ یَتَذَكَّرُوْنَ ۟ۚ

ಖಂಡಿತವಾಗಿಯು ಜನರಿಗೆ ಮನದಟ್ಟಾಗಲೆಂದು ನಾವು ಈ ಖುರ್‌ಆನಿನಲ್ಲಿ ಸರ್ವ ವಿಧದ ಉಪಮೆಗಳನ್ನು ವಿವರಿಸಿರುತ್ತೇವೆ. info
التفاسير:

external-link copy
28 : 39

قُرْاٰنًا عَرَبِیًّا غَیْرَ ذِیْ عِوَجٍ لَّعَلَّهُمْ یَتَّقُوْنَ ۟

ಕುರ್‌ಆನ್ ಇರುವುದು ಅರಬೀ ಭಾಷೆಯಲ್ಲಿ: ಅದರಲ್ಲಿ ಯಾವುದೇ ವಕ್ರತೆಯಿಲ್ಲ. ಬಹುಶಃ ಅವರು ಭಯಭಕ್ತಿ ಹೊಂದ ಬಹುದು. info
التفاسير:

external-link copy
29 : 39

ضَرَبَ اللّٰهُ مَثَلًا رَّجُلًا فِیْهِ شُرَكَآءُ مُتَشٰكِسُوْنَ وَرَجُلًا سَلَمًا لِّرَجُلٍ ؕ— هَلْ یَسْتَوِیٰنِ مَثَلًا ؕ— اَلْحَمْدُ لِلّٰهِ ۚ— بَلْ اَكْثَرُهُمْ لَا یَعْلَمُوْنَ ۟

ಅಲ್ಲಾಹನು ಒಂದು ಉಪಮೆಯನ್ನು ನೀಡುತ್ತಾನೆ. ಒಬ್ಬವ್ಯಕ್ತಿ : ಪರಸ್ಪರ ಕಚ್ಚಾಡುವ ಅನೇಕ ಪಾಲುದಾರರ ಗುಲಾಮನಾಗಿದ್ದಾನೆ. ಮತ್ತೊಬ್ಬ ವ್ಯಕ್ತಿಯು ಕೇವಲ ಒಬ್ಬ ವ್ಯಕ್ತಿಯ ಗುಲಾಮನಾಗಿದ್ದಾನೆ. ಇಬರಿಬ್ಬರ ಸ್ಥಿತಿ ಸಮಾನವಾಗಿದೆಯೇ ? ಸರ್ವಸ್ತುತಿಗಳು ಅಲ್ಲಾಹನಿಗೇ ಮೀಸಲು. ವಾಸ್ತವದಲ್ಲಿ ಅವರಲ್ಲಿನ ಹೆಚ್ಚಿನವರು ಅರಿಯುವುದಿಲ್ಲ. info
التفاسير:

external-link copy
30 : 39

اِنَّكَ مَیِّتٌ وَّاِنَّهُمْ مَّیِّتُوْنَ ۟ؗ

ಖಂಡಿತವಾಗಿಯೂ ನಿಮಗೂ ಮರಣ ಬರಲಿದೆ. ನಿಶ್ಚಯವಾಗಿಯು ಅವರಿಗೂ ಮರಣ ಬರಲಿದೆ. info
التفاسير:

external-link copy
31 : 39

ثُمَّ اِنَّكُمْ یَوْمَ الْقِیٰمَةِ عِنْدَ رَبِّكُمْ تَخْتَصِمُوْنَ ۟۠

ತರುವಾಯ ಪುನರುತ್ಥಾನದ ದಿನದಂದು ನೀವು ನಿಮ್ಮ ಪ್ರಭುವಿನ ಬಳಿ ತರ್ಕ ಮಾಡಲಿರುವಿರಿ. info
التفاسير: