আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

পৃষ্ঠা নং:close

external-link copy
24 : 29

فَمَا كَانَ جَوَابَ قَوْمِهٖۤ اِلَّاۤ اَنْ قَالُوا اقْتُلُوْهُ اَوْ حَرِّقُوْهُ فَاَنْجٰىهُ اللّٰهُ مِنَ النَّارِ ؕ— اِنَّ فِیْ ذٰلِكَ لَاٰیٰتٍ لِّقَوْمٍ یُّؤْمِنُوْنَ ۟

“ನೀವು ಅವನನ್ನು (ಇಬ್ರಾಹೀಮನನ್ನು) ಕೊಂದು ಹಾಕಿರಿ. ಇಲ್ಲವೇ ಸುಟ್ಟು ಹಾಕಿರಿ” ಎನ್ನುವುದನ್ನು ಬಿಟ್ಟು ಅವರ ಜನಾಂಗದವರ ಉತ್ತರ ಬೇರೇನಿರಲಿಲ್ಲ. ಆದರೆ ಅಲ್ಲಾಹನು ಅವರನ್ನು ಅಗ್ನಿಯಿಂದ ರಕ್ಷಿಸಿದನು. ನಿಸ್ಸಂದೇಹವಾಗಿಯು ಸತ್ಯವಿಶ್ವಾಸವಿರಿಸುವ ಜನರಿಗೆ ಇದರಲ್ಲಿ ಹಲವಾರು ನಿದರ್ಶನಗಳಿವೆ. info
التفاسير:

external-link copy
25 : 29

وَقَالَ اِنَّمَا اتَّخَذْتُمْ مِّنْ دُوْنِ اللّٰهِ اَوْثَانًا ۙ— مَّوَدَّةَ بَیْنِكُمْ فِی الْحَیٰوةِ الدُّنْیَا ۚ— ثُمَّ یَوْمَ الْقِیٰمَةِ یَكْفُرُ بَعْضُكُمْ بِبَعْضٍ وَّیَلْعَنُ بَعْضُكُمْ بَعْضًا ؗ— وَّمَاْوٰىكُمُ النَّارُ وَمَا لَكُمْ مِّنْ نّٰصِرِیْنَ ۟ۗۖ

ಪೈಗಂಬರ್ ಇಬ್ರಾಹೀಮ್ ಹೇಳಿದರು: ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವ ವಿಗ್ರಹಗಳನ್ನು ಪರಸ್ಪರ ಲೌಕಿಕ ಮಿತ್ರತ್ವಕ್ಕಾಗಿ ನಿಶ್ಚಯಿಸಿರುತ್ತೀರಿ. ಆದರೆ ಪುನರುತ್ಥಾನ ದಿನದಂದು ನೀವು ಪರಸ್ಪರ ಒಬ್ಬರು ಇನ್ನೊಬ್ಬರನ್ನು ನಿರಾಕರಿಸಿ ಬಿಡುವಿರಿ ಮತ್ತು ಪರಸ್ಪರರನ್ನು ಶಪಿಸತೊಡಗುವಿರಿ. ನಿಮ್ಮ ಅಭಯ ತಾಣವು ನರಕಾಗ್ನಿಯಾಗಿದೆ ಮತ್ತು ನಿಮಗೆ ಯಾವ ಸಹಾಯಕರೂ ಇರಲಾರರು. info
التفاسير:

external-link copy
26 : 29

فَاٰمَنَ لَهٗ لُوْطٌ ۘ— وَقَالَ اِنِّیْ مُهَاجِرٌ اِلٰی رَبِّیْ ؕ— اِنَّهٗ هُوَ الْعَزِیْزُ الْحَكِیْمُ ۟

ಲೂತರು ಅವರಲ್ಲಿ ವಿಶ್ವಾಸವಿರಿಸಿದರು ಮತ್ತು ಇಬ್ರಾಹೀಮರು ಹೇಳಿದರು: ನಾನು ನನ್ನ ಪ್ರಭುವಿನೆಡೆಗೆ ವಲಸೆ ಹೋಗಲಿರುವೆನು. ಅವನು ಮಹಾ ಪ್ರಚಂಡನೂ, ಸುಜ್ಞಾನಿಯೂ ಆಗಿರುವನು. info
التفاسير:

external-link copy
27 : 29

وَوَهَبْنَا لَهٗۤ اِسْحٰقَ وَیَعْقُوْبَ وَجَعَلْنَا فِیْ ذُرِّیَّتِهِ النُّبُوَّةَ وَالْكِتٰبَ وَاٰتَیْنٰهُ اَجْرَهٗ فِی الدُّنْیَا ۚ— وَاِنَّهٗ فِی الْاٰخِرَةِ لَمِنَ الصّٰلِحِیْنَ ۟

ತರುವಾಯ ನಾವು ಅವರಿಗೆ ಇಸ್‌ಹಾಕ್ ಮತ್ತು ಯಾಕೂಬ್‌ರನ್ನು ದಯಪಾಲಿಸಿದೆವು ಮತ್ತು ಪ್ರವಾದಿತ್ವವನ್ನು ಗ್ರಂಥವನ್ನು ಅವರ ಸಂತತಿಗಳಲ್ಲಿ ನಿಶ್ಚಯಿಸಿದೆವು ಮತ್ತು ಅವರಿಗೆ ಇಹಲೋಕದಲ್ಲೂ ಪ್ರತಿಫಲವನ್ನು ದಯಪಾಲಿಸಿದೆವು ಮತ್ತು ಪರಲೋಕದಲ್ಲಿ ಖಂಡಿತವಾಗಿಯು ಅವರು ಸದಾಚಾರಿಗಳಲ್ಲಾಗಿರುವರು. info
التفاسير:

external-link copy
28 : 29

وَلُوْطًا اِذْ قَالَ لِقَوْمِهٖۤ اِنَّكُمْ لَتَاْتُوْنَ الْفَاحِشَةَ ؗ— مَا سَبَقَكُمْ بِهَا مِنْ اَحَدٍ مِّنَ الْعٰلَمِیْنَ ۟

ಲೂತ್ ತಮ್ಮ ಜನಾಂಗದವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನಿಮಗಿಂತ ಮುಂಚೆ ಲೋಕದವರಲ್ಲಿ ಯಾರು ಮಾಡಿರದಂತಹ ನೀಚಕೃತ್ಯವನ್ನು ನೀವು ಮಾಡುತ್ತಿರುವಿರಿ. info
التفاسير:

external-link copy
29 : 29

اَىِٕنَّكُمْ لَتَاْتُوْنَ الرِّجَالَ وَتَقْطَعُوْنَ السَّبِیْلَ ۙ۬— وَتَاْتُوْنَ فِیْ نَادِیْكُمُ الْمُنْكَرَ ؕ— فَمَا كَانَ جَوَابَ قَوْمِهٖۤ اِلَّاۤ اَنْ قَالُوا ائْتِنَا بِعَذَابِ اللّٰهِ اِنْ كُنْتَ مِنَ الصّٰدِقِیْنَ ۟

ನೀವು ಕಾಮೇಚ್ಛೆಗಾಗಿ ಪರುಷರನ್ನು ಸಮೀಪಿಸುತ್ತಿರುವಿರಾ?ಮತ್ತು ದರೋಡೆ ಮಾಡುತ್ತಿರುವಿರಾ? ಹಾಗೂ ನಿಮ್ಮ ಸಭೆಗಳಲ್ಲಿ ನಿರ್ಲಜ್ಜೆಯ ಕೃತ್ಯವನ್ನು ಎಸಗುತ್ತಿರುವಿರಾ? ಆದರೆ ಅವರ ಜನಾಂಗದವರ ಉತ್ತರ ನೀನು ಸತ್ಯವಂತನಾಗಿದ್ದರೆ ಅಲ್ಲಾಹನ ಯಾತನೆಯನ್ನು ನಮ್ಮಲ್ಲಿಗೆ ತಾ. ಎಂಬುದರ ಹೊರತು ಬೇರೆನಿರಲಿಲ್ಲ. info
التفاسير:

external-link copy
30 : 29

قَالَ رَبِّ انْصُرْنِیْ عَلَی الْقَوْمِ الْمُفْسِدِیْنَ ۟۠

ಆಗ ಲೂತರು ಪ್ರಾರ್ಥಿಸಿದರು: ಓ ನನ್ನ ಪ್ರಭುವೇ, ನೀನು ಈ ದುಷ್ಟ ಜನರ ವಿರುದ್ದ ನನಗೆ ಸಹಾಯ ಮಾಡು. info
التفاسير: