আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
233 : 2

وَالْوَالِدٰتُ یُرْضِعْنَ اَوْلَادَهُنَّ حَوْلَیْنِ كَامِلَیْنِ لِمَنْ اَرَادَ اَنْ یُّتِمَّ الرَّضَاعَةَ ؕ— وَعَلَی الْمَوْلُوْدِ لَهٗ رِزْقُهُنَّ وَكِسْوَتُهُنَّ بِالْمَعْرُوْفِ ؕ— لَا تُكَلَّفُ نَفْسٌ اِلَّا وُسْعَهَا ۚ— لَا تُضَآرَّ وَالِدَةٌ بِوَلَدِهَا وَلَا مَوْلُوْدٌ لَّهٗ بِوَلَدِهٖ ۗ— وَعَلَی الْوَارِثِ مِثْلُ ذٰلِكَ ۚ— فَاِنْ اَرَادَا فِصَالًا عَنْ تَرَاضٍ مِّنْهُمَا وَتَشَاوُرٍ فَلَا جُنَاحَ عَلَیْهِمَا ؕ— وَاِنْ اَرَدْتُّمْ اَنْ تَسْتَرْضِعُوْۤا اَوْلَادَكُمْ فَلَا جُنَاحَ عَلَیْكُمْ اِذَا سَلَّمْتُمْ مَّاۤ اٰتَیْتُمْ بِالْمَعْرُوْفِ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ بِمَا تَعْمَلُوْنَ بَصِیْرٌ ۟

ಹಾಲುಣಿಸುವ ಅವಧಿಯನ್ನು ಪೂರ್ಣಗೊಳಿಸಲು ಉದ್ದೇಶಿಸುವ ವಿಚ್ಛೇದಿತ ತಾಯಂದಿರು ತಮ್ಮ ಮಕ್ಕಳಿಗೆ ಪೂರ್ಣ ಎರಡು ವರ್ಷಗಳ ಕಾಲ ಹಾಲುಣಿಸಲಿ ಮತ್ತು ತಂದೆಯ ಮೇಲೆ ಸದಾಚಾರದೊಂದಿಗೆ ಅವರ ಆಹಾರ ಹಾಗೂ ವಸ್ತçದ ಹೊಣೆಯು ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕನುಗುಣವಾಗಿಯೇ ಹೊಣೆಗಾರಾನಾಗುತ್ತಾನೆ. ತಾಯಿಯನ್ನು ತನ್ನ ಮಗುವಿನ ನಿಮತ್ತ ತೊಂದರೆಗೊಳಪಡಿಸಬಾರದು ತಂದೆಯನ್ನು ತನ್ನ ಮಗುವಿನ ನಿಮಿತ್ತ ತೊಂದರೆಗೊಳಪಡಿಸಬಾರದು. (ಅನಾಥಮಗುವಿನ) ವಾರೀಸುದಾರನ ಮೇಲೂ ಅದೇ ರೀತಿಯ ಹೊಣೆಗಾರಿಕೆಯಿದೆ. ಇನ್ನು ಅವರಿಬ್ಬರೂ (ತಂದೆ ತಾಯಿಯು) ಪರಸ್ಪರ ಸಮಾಲೋಚನೆಯಿಂದ ಹಾಲುಣಿಸುದನ್ನು ಉದ್ದೇಶಿಸಿದರೆ ಆಗ ಅವರಿಬ್ಬರ ಮೇಲೆ ಯಾವ ದೋಷವಿರುದಿಲ್ಲ ಮತ್ತು ನೀವು ನಿಮ್ಮ ಮಕ್ಕಳಿಗೆ ಬೇರೆ ಸ್ತಿçÃಯರಿಂದ ಸ್ತನಪಾನ ಮಾಡಿಸಲು ಇಚ್ಛಿಸಿದರು ನೀವು ಸದಾಚಾರದೊಂದಿಗೆ, ನೀಡಲು ನಿಶ್ಚಯಿಸಿರುವುದನ್ನು ನೀಡಿದರೆ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ನಿಸ್ಸಂಶಯವಾಗಿಯು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಮೇಲ್ವಿಚಾರಣೆ ಮಾಡುತ್ತಿದ್ದಾನೆ ಎಂಬುದನ್ನು ಅರಿತುಕೊಳ್ಳಿರಿ. info
التفاسير: