আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

পৃষ্ঠা নং:close

external-link copy
12 : 19

یٰیَحْیٰی خُذِ الْكِتٰبَ بِقُوَّةٍ ؕ— وَاٰتَیْنٰهُ الْحُكْمَ صَبِیًّا ۟ۙ

ಅಲ್ಲಾಹನು ಹೇಳಿದನು: ಓ ಯಹ್ಯಾ, “ನೀನು ಗ್ರಂಥವನ್ನು ಸದೃಢತೆಯಿಂದ ಹಿಡಿದುಕೋ” ಮತ್ತು ನಾವು ಅವನಿಗೆ ಬಾಲ್ಯದಲ್ಲೇ ಸುಜ್ಞಾನವನ್ನು ದಯಪಾಲಿಸಿದ್ದೆವು. info
التفاسير:

external-link copy
13 : 19

وَّحَنَانًا مِّنْ لَّدُنَّا وَزَكٰوةً ؕ— وَكَانَ تَقِیًّا ۟ۙ

ಮತ್ತು ನಮ್ಮ ಬಳಿಯಿಂದ ದಯೆ-ವಾತ್ಸಲ್ಯ ಮತ್ತು ಪಾವಿತ್ರö್ಯವನ್ನು ನೀಡಿದ್ದೆವು. ಅವರು ಭಯ ಭಕ್ತಿಯುಳ್ಳ ವ್ಯಕ್ತಿಯಾಗಿದ್ದರು. info
التفاسير:

external-link copy
14 : 19

وَّبَرًّا بِوَالِدَیْهِ وَلَمْ یَكُنْ جَبَّارًا عَصِیًّا ۟

ಮತ್ತು ಅವರು ತಮ್ಮ ಮಾತಾಪಿತರೊಂದಿಗೆ ಸೌಜನ್ಯಪೂರ್ಣವಾಗಿ ವರ್ತಿಸುವವರಾಗಿದ್ದರು. ಅವರು ದುಷ್ಟರು ಧಿಕ್ಕಾರಿಯು ಆಗಿರಲಿಲ್ಲ. info
التفاسير:

external-link copy
15 : 19

وَسَلٰمٌ عَلَیْهِ یَوْمَ وُلِدَ وَیَوْمَ یَمُوْتُ وَیَوْمَ یُبْعَثُ حَیًّا ۟۠

ಅವರು ಜನಿಸಿದ ದಿನವೂ, ಮರಣ ಹೊಂದುವ ದಿನವೂ ಹಾಗೂ ಅವರು ಜೀವಂತ ಎಬ್ಬಿಸಲಾಗುವ ದಿನವೂ ಅವರ ಮೇಲೆ ಶಾಂತಿಯಿರುವುದು. info
التفاسير:

external-link copy
16 : 19

وَاذْكُرْ فِی الْكِتٰبِ مَرْیَمَ ۘ— اِذِ انْتَبَذَتْ مِنْ اَهْلِهَا مَكَانًا شَرْقِیًّا ۟ۙ

(ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮರ್ಯಮರ ವಿಷಯವನ್ನು ಪ್ರಸ್ತಾಪಿಸಿರಿ. ಅವರು ತನ್ನ ಜನರಿಂದ ಅಗಲಿ ಪೂರ್ವ ದಿಕ್ಕಿನೆಡೆಗೆ ಹೋದ ಸಂದರ್ಭ ಸ್ಮರಿಸಿರಿ. info
التفاسير:

external-link copy
17 : 19

فَاتَّخَذَتْ مِنْ دُوْنِهِمْ حِجَابًا ۫— فَاَرْسَلْنَاۤ اِلَیْهَا رُوْحَنَا فَتَمَثَّلَ لَهَا بَشَرًا سَوِیًّا ۟

ಮತ್ತು ಆಕೆ ಅವರಿಂದ ಮರೆಯಾಗಿ ಒಂದು ತೆರೆಯನ್ನು ಮಾಡಿಕೊಂಡಳು. ಅನಂತರ ನಾವು ಅವಳ ಬಳಿಗೆ ನಮ್ಮ ಪವಿತ್ರಾತ್ಮ (ಜಿಬ್ರೀಲ್‌ನನ್ನು) ಕಳುಹಿಸಿಕೊಟ್ಟೆವು ಅವನು ಆಕೆಯ ಮುಂದೆ ಪರಿಪೂರ್ಣ ಮಾನವ ರೂಪದಲ್ಲಿ ಪ್ರತ್ಯಕ್ಷವಾದನು. info
التفاسير:

external-link copy
18 : 19

قَالَتْ اِنِّیْۤ اَعُوْذُ بِالرَّحْمٰنِ مِنْكَ اِنْ كُنْتَ تَقِیًّا ۟

ಮರ್ಯಮ್ ಹೇಳಿದರು: ನೀನು ಅಲ್ಲಾಹನ ಭಯಭಕ್ತಿಯನ್ನು ಹೊಂದಿದವನಾಗಿದ್ದರೆ ನಿನ್ನಿಂದ ನಾನು ಪರಮ ದಯಾಮಯನ ಅಭಯವನ್ನು ಯಾಚಿಸುತ್ತೇನೆ. info
التفاسير:

external-link copy
19 : 19

قَالَ اِنَّمَاۤ اَنَا رَسُوْلُ رَبِّكِ ۖۗ— لِاَهَبَ لَكِ غُلٰمًا زَكِیًّا ۟

ಅವನು (ಪವಿತ್ರಾತ್ಮ) ಉತ್ತರಿಸಿದನು: ನಾನಂತು ನಿನ್ನ ಪ್ರಭುವಿನ ನಿಯೋಗಿತ ದೂತನಾಗಿದ್ದೇನೆ. ನಿನಗೆ ಪರಿಶುದ್ಧನಾದ ಒಬ್ಬ ಬಾಲಕನನ್ನು ನೀಡಲೆಂದು ಬಂದಿರುವೆನು. info
التفاسير:

external-link copy
20 : 19

قَالَتْ اَنّٰی یَكُوْنُ لِیْ غُلٰمٌ وَّلَمْ یَمْسَسْنِیْ بَشَرٌ وَّلَمْ اَكُ بَغِیًّا ۟

ಮರ್ಯಮ್ ಹೇಳಿದರು: ನನಗೆ ಮಗುವಾಗುವುದಾದರೂ ಹೇಗೆ? ನನ್ನನ್ನು ಯಾವೊಬ್ಬ ಮನುಷ್ಯನು ಸ್ಪರ್ಷಿಸಿರುವುದಿಲ್ಲ ಹಾಗೂ ನಾನು ನಡತೆಗೆಟ್ಟವಳೂ ಅಲ್ಲ. info
التفاسير:

external-link copy
21 : 19

قَالَ كَذٰلِكِ ۚ— قَالَ رَبُّكِ هُوَ عَلَیَّ هَیِّنٌ ۚ— وَلِنَجْعَلَهٗۤ اٰیَةً لِّلنَّاسِ وَرَحْمَةً مِّنَّا ۚ— وَكَانَ اَمْرًا مَّقْضِیًّا ۟

ಅವನು (ಜಿಬ್ರೀಲ್) ಹೇಳಿದನು: ಹಾಗೆಯೇ ಆಗುವುದು ನಿಮ್ಮ ಪ್ರಭು ಹೇಳುತ್ತಾನೆ. 'ಇದು ನನಗೆ ಅತಿ ಸುಲಭವಾಗಿದೆ. ನಾನು ಅವನನ್ನು ಜನರಿಗೆ ಒಂದು ನಿದರ್ಶನವನ್ನಾಗಿಯೂ, ನಮ್ಮ ಕಡೆಯ ವಿಶೇಷ ಕಾರುಣ್ಯವನ್ನಾಗಿಯೂ ಮಾಡಲಿದ್ದೇವೆ'.ಇದು ನಿಶ್ಚಿತ ಸಂಗತಿಯಾಗಿದೆ. info
التفاسير:

external-link copy
22 : 19

فَحَمَلَتْهُ فَانْتَبَذَتْ بِهٖ مَكَانًا قَصِیًّا ۟

ಮರ್ಯಮರು ಗರ್ಭಿಣಿಯಾದರು. ಇದೇ ಸ್ಥಿತಿಯಲ್ಲಿ ಅವರು ದೂರವಾದ ಪ್ರದೇಶಕ್ಕೆ ಹೋದರು. info
التفاسير:

external-link copy
23 : 19

فَاَجَآءَهَا الْمَخَاضُ اِلٰی جِذْعِ النَّخْلَةِ ۚ— قَالَتْ یٰلَیْتَنِیْ مِتُّ قَبْلَ هٰذَا وَكُنْتُ نَسْیًا مَّنْسِیًّا ۟

ಅನಂತರ ಅವರನ್ನು ಪ್ರಸವವೇದನೆಯು ಒಂದು ಖರ್ಜೂರದ ಮರದ ಬೊಡ್ಡೆಯ ಕೆಳಗೆ ತಂದು ಬಿಟ್ಟಿತು. ಅವರೆಂದರು: ಅಯ್ಯೋ! ನಾನು ಇದಕ್ಕೆ ಮೊದಲೇ ಮರಣ ಹೊಂದಿರುತ್ತಿದ್ದರೆ! ಹಾಗೂ ನಾನು ಜನರ ನೆನಪಿನಿಂದಲೂ ವಿಸ್ಮರಣೀಯ ವಸ್ತುವಾಗಿರುತ್ತಿದ್ದರೆ!(ಚೆನ್ನಾಗಿತ್ತು). info
التفاسير:

external-link copy
24 : 19

فَنَادٰىهَا مِنْ تَحْتِهَاۤ اَلَّا تَحْزَنِیْ قَدْ جَعَلَ رَبُّكِ تَحْتَكِ سَرِیًّا ۟

ಅಷ್ಟರಲ್ಲಿ ಜಿಬ್ರೀಲನು ಮರದಡಿಯಿಂದ ಕೂಗಿ ಹೇಳಿದನು: “ನೀನು ದುಃಖಿಸಬೇಡ; ನಿನ್ನ ಪ್ರಭುವು ನಿನ್ನ ತಳಭಾಗದಲ್ಲಿ ಚಿಲುಮೆಯೊಂದನ್ನು ಹರಿಸಿರುವನು” info
التفاسير:

external-link copy
25 : 19

وَهُزِّیْۤ اِلَیْكِ بِجِذْعِ النَّخْلَةِ تُسٰقِطْ عَلَیْكِ رُطَبًا جَنِیًّا ۟ؗ

ಮತ್ತು ನೀನು ನಿನ್ನೆಡೆಗೆ ಆ ಖರ್ಜೂರ ಮರದ ಬೊಡ್ಡೆಯನ್ನು ಅಲುಗಾಡಿಸು. ಅದು ನಿನ್ನ ಮೇಲೆ ತಾಜಾ ಖರ್ಜೂರ ಹಣ್ಣನ್ನು ಉದುರಿಸುವುದು. info
التفاسير: