ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
103 : 5

مَا جَعَلَ اللّٰهُ مِنْ بَحِیْرَةٍ وَّلَا سَآىِٕبَةٍ وَّلَا وَصِیْلَةٍ وَّلَا حَامٍ ۙ— وَّلٰكِنَّ الَّذِیْنَ كَفَرُوْا یَفْتَرُوْنَ عَلَی اللّٰهِ الْكَذِبَ ؕ— وَاَكْثَرُهُمْ لَا یَعْقِلُوْنَ ۟

ಬಹೀರ, ಸಾಇಬ, ವಸೀಲ, ಹಾಮ್ ಮುಂತಾದ ಹರಕೆ ಮೃಗಗಳನ್ನು ಅಲ್ಲಾಹು ನೇಮಿಸಿಲ್ಲ.[1] ಆದರೆ ಸತ್ಯನಿಷೇಧಿಗಳು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರೂ ಅರ್ಥಮಾಡಿಕೊಳ್ಳದವರಾಗಿದ್ದಾರೆ. info

[1] ಅನೇಕ ಮರಿಗಳಿಗೆ ಜನ್ಮ ನೀಡಿದ ಜಾನುವಾರಿನ ಕಿವಿಯನ್ನು ಹರಿದು ಮಕ್ಕಾದ ಬಹುದೇವಾರಾಧಕರು ಅದನ್ನು ವಿಗ್ರಹಗಳಿಗೆ ಹರಕೆ ಮಾಡುತ್ತಿದ್ದರು. ಅವರು ಅದನ್ನು ಬಹೀರ ಎಂದು ಕರೆಯುತ್ತಿದ್ದರು. ಕೆಲವು ಜಾನುವಾರುಗಳನ್ನು ಅವರು ವಿಗ್ರಹಗಳಿಗೆ ಹರಕೆ ಮಾಡಿ ಬಿಟ್ಟು ಬಿಡುತ್ತಿದ್ದರು. ಯಾರೂ ಅದನ್ನು ಮುಟ್ಟುತ್ತಿರಲಿಲ್ಲ ಮತ್ತು ತೊಂದರೆ ಕೊಡುತ್ತಿರಲಿಲ್ಲ. ಅವರು ಅದನ್ನು ಸಾಇಬ ಎಂದು ಕರೆಯುತ್ತಿದ್ದರು. ಒಂದು ಪ್ರಾಣಿ ನಿರಂತರ ಹೆಣ್ಣು ಮರಿಗಳಿಗೆ ಜನ್ಮ ನೀಡಿದರೆ ಅವರು ಅದನ್ನು ವಸೀಲ ಎಂದು ಕರೆದು ವಿಗ್ರಹಗಳಿಗೆ ಹರಕೆ ಮಾಡುತ್ತಿದ್ದರು. ಒಂದು ಗಂಡು ಒಂಟೆಯಿಂದ ಅನೇಕ ಮರಿಗಳುಂಟಾದರೆ ಅವರು ಅದನ್ನು ಹಾಮ್ ಎಂದು ಕರೆದು ಹರಕೆ ಮಾಡುತ್ತಿದ್ದರು.

التفاسير: