ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
72 : 8

اِنَّ الَّذِیْنَ اٰمَنُوْا وَهَاجَرُوْا وَجٰهَدُوْا بِاَمْوَالِهِمْ وَاَنْفُسِهِمْ فِیْ سَبِیْلِ اللّٰهِ وَالَّذِیْنَ اٰوَوْا وَّنَصَرُوْۤا اُولٰٓىِٕكَ بَعْضُهُمْ اَوْلِیَآءُ بَعْضٍ ؕ— وَالَّذِیْنَ اٰمَنُوْا وَلَمْ یُهَاجِرُوْا مَا لَكُمْ مِّنْ وَّلَایَتِهِمْ مِّنْ شَیْءٍ حَتّٰی یُهَاجِرُوْا ۚ— وَاِنِ اسْتَنْصَرُوْكُمْ فِی الدِّیْنِ فَعَلَیْكُمُ النَّصْرُ اِلَّا عَلٰی قَوْمٍ بَیْنَكُمْ وَبَیْنَهُمْ مِّیْثَاقٌ ؕ— وَاللّٰهُ بِمَا تَعْمَلُوْنَ بَصِیْرٌ ۟

ಯಾರು ವಿಶ್ವಾಸವಿಟ್ಟು ವಲಸೆ ಹೋದರೋ ಮತ್ತು ತಮ್ಮ ಸಂಪತ್ತುಗಳಿAದ ಹಾಗೂ ತಮ್ಮ ಶರೀರಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದರೋ ಮತ್ತು ಯಾರು ಅವರಿಗೆ ಆಶ್ರಯವನ್ನೂ, ಸಹಾಯವನ್ನೂ ನೀಡಿದರೋ ಅವರೇ ಪರಸ್ಪರ ಆಪ್ತಮಿತ್ರರಾಗಿದ್ದಾರೆ. ಮತ್ತು ಯಾರು ವಿಶ್ವಾಸವಿಟ್ಟರೋ ಆದರೆ ವಲಸೆ ಹೋಗಲಿಲ್ಲವೋ ಅವರು ವಲಸೆ ಹೋಗುವವರೆಗೆ ನಿಮ್ಮ ಮೇಲೆ ಅವರ ಯಾವುದೇ ಹೊಣೆ ಇರುವುದಿಲ್ಲ. ಆದರೆ ಧರ್ಮದ ವಿಷಯದಲ್ಲಿ ಅವರು ನಿಮ್ಮೊಂದಿಗೆ ಸಹಾಯ ಬೇಡಿದರೆ ಅವರಿಗೆ ಸಹಾಯ ನೀಡಬೇಕಾದುದು ನಿಮ್ಮ ಮೇಲೆ ಹೊಣೆಯಾಗಿದೆ. ಆದರೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ಹೊರತು. ನೀವು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ನೋಡುತ್ತಿದ್ದಾನೆ. info
التفاسير: