Traduzione dei Significati del Sacro Corano - Traduzione Canadese - Bashir Maisuri

Numero di pagina:close

external-link copy
15 : 10

وَاِذَا تُتْلٰی عَلَیْهِمْ اٰیَاتُنَا بَیِّنٰتٍ ۙ— قَالَ الَّذِیْنَ لَا یَرْجُوْنَ لِقَآءَنَا ائْتِ بِقُرْاٰنٍ غَیْرِ هٰذَاۤ اَوْ بَدِّلْهُ ؕ— قُلْ مَا یَكُوْنُ لِیْۤ اَنْ اُبَدِّلَهٗ مِنْ تِلْقَآئِ نَفْسِیْ ۚ— اِنْ اَتَّبِعُ اِلَّا مَا یُوْحٰۤی اِلَیَّ ۚ— اِنِّیْۤ اَخَافُ اِنْ عَصَیْتُ رَبِّیْ عَذَابَ یَوْمٍ عَظِیْمٍ ۟

ಮತ್ತು ಅವರ ಮುಂದೆ ನಮ್ಮ ಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರು ಇದರ ಹೊರತು ಬೇರಾವುದಾದರೂ ಖುರ್‌ಆನನ್ನು ತನ್ನಿರಿ ಇಲ್ಲವೇ ಇದರಲ್ಲಿ ಸ್ವಲ್ಪ ತಿದ್ದುಪಡಿಯನ್ನು ಮಾಡಿರೆಂದು ಹೇಳುತ್ತಾರೆ (ಓ ಪೈಗಂಬರರೇ) ನೀವು ಹೇಳಿರಿ : ನನ್ನ ಕಡೆಯಿಂದ ಇದರಲ್ಲಿ ತಿದ್ದುಪಡಿ ಮಾಡಲು ನನಗೆ ಯಾವುದೇ ಹಕ್ಕಿರುವುದಿಲ್ಲ, ನಾನಂತೂ ಕೇವಲ ನನ್ನೆಡೆಗೆ ದಿವ್ಯವಾಣಿಯ ಮೂಲಕ ಬರುವುದನ್ನೇ ಅನುಸರಿಸುತ್ತೇನೆ, ನಾನು ನನ್ನ ಪ್ರಭುವಿಗೆ ಧಿಕ್ಕಾರವೆಸಗುವುದಾದರೆ ಖಂಡಿತವಾಗಿಯೂ ನಾನು ಆ ಒಂದು ಮಹಾ ದಿನದ ಯಾತನೆಯಿಂದ ಭಯಪಡುತ್ತೇನೆ. info
التفاسير:

external-link copy
16 : 10

قُلْ لَّوْ شَآءَ اللّٰهُ مَا تَلَوْتُهٗ عَلَیْكُمْ وَلَاۤ اَدْرٰىكُمْ بِهٖ ۖؗۗ— فَقَدْ لَبِثْتُ فِیْكُمْ عُمُرًا مِّنْ قَبْلِهٖ ؕ— اَفَلَا تَعْقِلُوْنَ ۟

ಹೇಳಿರಿ: ಅಲ್ಲಾಹನು ಇಚ್ಛಿಸಿರುತ್ತಿದ್ದರೆ ನಾನು ಇದನ್ನು ನಿಮ್ಮ ಮುಂದೆ ಓದಿ ಹೇಳುತ್ತಿರಲಿಲ್ಲ, ಮತ್ತು ಅವನು ನಿಮಗೆ ಇದರ ಅರಿವನ್ನು ನೀಡುತ್ತಿರಲಿಲ್ಲ, ಇದೇಕೆಂದರೆ ನಾನು ಇದಕ್ಕೆ ಮುಂಚೆ ಒಂದು ದೀರ್ಘ ಕಾಲವನ್ನು ನಿಮ್ಮ ನಡುವೆ ಕಳೆದಿರುವೆನು, ಹೀಗಿರುವಾಗ ನೀವು ಚಿಂತಿಸುವುದಿಲ್ಲವೇ ? info
التفاسير:

external-link copy
17 : 10

فَمَنْ اَظْلَمُ مِمَّنِ افْتَرٰی عَلَی اللّٰهِ كَذِبًا اَوْ كَذَّبَ بِاٰیٰتِهٖ ؕ— اِنَّهٗ لَا یُفْلِحُ الْمُجْرِمُوْنَ ۟

ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸಿದವನಿಗಿಂತ ಅತಿದೊಡ್ಡ ಅಕ್ರಮಿಯು ಇನ್ನಾರಿದ್ದಾನೆ? ಖಂಡಿತವಾಗಿಯೂ ಅಪರಾಧಿಗಳು ಯಶಸ್ಸು ಹೊಂದಲಾರರು. info
التفاسير:

external-link copy
18 : 10

وَیَعْبُدُوْنَ مِنْ دُوْنِ اللّٰهِ مَا لَا یَضُرُّهُمْ وَلَا یَنْفَعُهُمْ وَیَقُوْلُوْنَ هٰۤؤُلَآءِ شُفَعَآؤُنَا عِنْدَ اللّٰهِ ؕ— قُلْ اَتُنَبِّـُٔوْنَ اللّٰهَ بِمَا لَا یَعْلَمُ فِی السَّمٰوٰتِ وَلَا فِی الْاَرْضِ ؕ— سُبْحٰنَهٗ وَتَعٰلٰی عَمَّا یُشْرِكُوْنَ ۟

ಅವರು ಅಲ್ಲಾಹನ ಹೊರತು ತಮಗೆ ಹಾನಿಯನ್ನಾಗಲಿ ಪ್ರಯೋಜನವನ್ನಾಗಲಿ ಉಂಟುಮಾಡಲಾಗದAತಹ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು ಹೇಳುತ್ತಾರೆ, ಇವರು ಅಲ್ಲಾಹನ ಬಳಿ ನಮ್ಮ ಶಿಫಾರಸ್ಸುಗಾರರಾಗಿದ್ದಾರೆ, ಹೇಳಿರಿ ಅಲ್ಲಾಹನಿಗೆ ಅವನು ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ತಿಳಿಯದಂಥ ಸುದ್ದಿಗಳನ್ನು ಹೇಳುತ್ತಿರುವಿರಾ ? ಅವರು ಎಸಗುತ್ತಿರುವ ಬಹುದೇವಾರಾಧನೆಯಿಂದ ಅವನು ಅದೆಷ್ಟೋ ಪವಿತ್ರನು, ಉನ್ನತನು ಆಗಿರುವನು. info
التفاسير:

external-link copy
19 : 10

وَمَا كَانَ النَّاسُ اِلَّاۤ اُمَّةً وَّاحِدَةً فَاخْتَلَفُوْا ؕ— وَلَوْلَا كَلِمَةٌ سَبَقَتْ مِنْ رَّبِّكَ لَقُضِیَ بَیْنَهُمْ فِیْمَا فِیْهِ یَخْتَلِفُوْنَ ۟

ಆರಂಭದಲ್ಲಿ ಸಕಲ ಜನರು ಒಂದೇ ಸಮುದಾಯದವರಾಗಿದ್ದರು, ಆನಂತರ ಅವರು ಭಿನ್ನತೆಯನ್ನು ತೋರಿದರು, ನಿಮ್ಮ ಪ್ರಭುವಿನಿಂದ ಇದಕ್ಕೆ ಮೊದಲೇ ನಿರ್ಣಯಿಸಲ್ಪಟ್ಟ ವಚನವು ಇಲ್ಲದಿರುತ್ತಿದ್ದರೆ ಅವರು ಭಿನ್ನತೆ ಹೊಂದಿದ್ದ ವಿಚಾರಗಳಲ್ಲಿ ತೀರ್ಮಾನ ಮಾಡಿಬಿಡಲಾಗುತ್ತಿತ್ತು. info
التفاسير:

external-link copy
20 : 10

وَیَقُوْلُوْنَ لَوْلَاۤ اُنْزِلَ عَلَیْهِ اٰیَةٌ مِّنْ رَّبِّهٖ ۚ— فَقُلْ اِنَّمَا الْغَیْبُ لِلّٰهِ فَانْتَظِرُوْا ۚ— اِنِّیْ مَعَكُمْ مِّنَ الْمُنْتَظِرِیْنَ ۟۠

ಈ ಪೈಗಂಬರರ ಮೇಲೆ ಅವರ ಪ್ರಭುವಿನ ಕಡೆಯಿಂದ ಯಾವುದಾದರು ದೃಷ್ಟಾಂತವು ಏಕೆ ಅವತೀರ್ಣಗೊಳಿಸಲಾಗಿಲ್ಲ ? ಎಂದು ಅವರು ಹೇಳುತ್ತಾರೆ, ಉತ್ತರಿಸಿರಿ; ಅಗೋಚರ ಜ್ಞಾನವು ಕೇವಲ ಅಲ್ಲಾಹನಿಗೆ ಮಾತ್ರವಿದೆ, ಆದುದರಿಂದ ಇನ್ನು ನೀವು ಕಾಯುತ್ತಿರಿ. ಖಂಡಿತವಾಗಿಯೂ ನಾನು ಸಹ ನಿಮ್ಮ ಜೊತೆ ಕಾಯುತ್ತಿರುವೆನು. info
التفاسير: