કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી

પેજ નંબર:close

external-link copy
31 : 7

یٰبَنِیْۤ اٰدَمَ خُذُوْا زِیْنَتَكُمْ عِنْدَ كُلِّ مَسْجِدٍ وَّكُلُوْا وَاشْرَبُوْا وَلَا تُسْرِفُوْا ؕۚ— اِنَّهٗ لَا یُحِبُّ الْمُسْرِفِیْنَ ۟۠

ಓ ಆದಮ್ ಸಂತತಿಗಳೇ, ನೀವು ಪ್ರತಿಯೊಂದು ನಮಾಜಿನ ಸಮಯದಲ್ಲಿ ನಿಮ್ಮ ವಸ್ತಾçಲಂಕಾರಗಳನ್ನು ಧರಿಸಿಕೊಳ್ಳಿರಿ. ನೀವು ಉಣ್ಣಿರಿ ಹಾಗೂ ಕುಡಿಯಿರಿ ಮತ್ತು ದುರ್ವ್ಯಯ ಮಾಡಬೇಡಿರಿ. ನಿಸ್ಸಂಶಯವಾಗಿಯು ಅಲ್ಲಾಹನು ದುರ್ವ್ಯಯ ಮಾಡುವವರನ್ನು ಇಷ್ಟಪಡುವುದಿಲ್ಲ. info
التفاسير:

external-link copy
32 : 7

قُلْ مَنْ حَرَّمَ زِیْنَةَ اللّٰهِ الَّتِیْۤ اَخْرَجَ لِعِبَادِهٖ وَالطَّیِّبٰتِ مِنَ الرِّزْقِ ؕ— قُلْ هِیَ لِلَّذِیْنَ اٰمَنُوْا فِی الْحَیٰوةِ الدُّنْیَا خَالِصَةً یَّوْمَ الْقِیٰمَةِ ؕ— كَذٰلِكَ نُفَصِّلُ الْاٰیٰتِ لِقَوْمٍ یَّعْلَمُوْنَ ۟

ಹೇಳಿರಿ: ಅಲ್ಲಾಹನು ತನ್ನ ದಾಸರಿಗಾಗಿ ಉಂಟು ಮಾಡಿರುವ ಅಲಂಕಾರ ವಸ್ತುಗಳನ್ನೂ, ಉತ್ತಮ ಅಹಾರಗಳನ್ನೂ ನಿಷಿದ್ಧಗೊಳಿಸಿರುವವನಾರು? ಹೇಳಿರಿ: ಈ ಅನುಗ್ರಹಗಳು ಐಹಿಕ ಜೀವನದಲ್ಲಿ ಸತ್ಯವಿಶ್ವಾಸಿಗಳಿಗೆ ಸೇರಿವೆ. ಮತ್ತು ಪುನರುತ್ಥಾನದ ದಿನದಂದು ಅವರಿಗೇ ಸೀಮಿತವಾಗಿರುವುವು. ನಾವು ಇದೇ ಪ್ರಕಾರ ದೃಷ್ಟಾಂತಗಳನ್ನು ವಿವೇಕ ಹೊಂದಿದ ಜನರಿಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತೇವೆ. info
التفاسير:

external-link copy
33 : 7

قُلْ اِنَّمَا حَرَّمَ رَبِّیَ الْفَوَاحِشَ مَا ظَهَرَ مِنْهَا وَمَا بَطَنَ وَالْاِثْمَ وَالْبَغْیَ بِغَیْرِ الْحَقِّ وَاَنْ تُشْرِكُوْا بِاللّٰهِ مَا لَمْ یُنَزِّلْ بِهٖ سُلْطٰنًا وَّاَنْ تَقُوْلُوْا عَلَی اللّٰهِ مَا لَا تَعْلَمُوْنَ ۟

ಹೇಳಿರಿ: ನನ್ನ ಪ್ರಭುವು ಪ್ರತ್ಯಕ್ಷವಾಗಿರುವ, ಪರೋಕ್ಷವಾಗಿರುವ ಸಕಲ ನೀಚಕೃತ್ಯಗಳನ್ನೂ, ಪಾಪದ ಸಂಗತಿಗಳನ್ನೂ, ಅನ್ಯಾಯವಾಗಿ ದೌರ್ಜನ್ಯವೆಸಗುವುದನ್ನೂ, ಯಾವುದೇ ಆಧಾರವಿಲ್ಲದೇ ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ನಿಶ್ಚಯಿಸುವುದನ್ನು, ನಿಮಗೆ ಅರಿವಿಲ್ಲದ್ದನ್ನು ಅಲ್ಲಾಹನ ಹೆಸರಿನಲ್ಲಿ ಹೇಳುವುದನ್ನು ನಿಶ್ಚಯವಾಗಿಯು ನಿಷಿದ್ಧಗೊಳಿಸಿದ್ದಾನೆ. info
التفاسير:

external-link copy
34 : 7

وَلِكُلِّ اُمَّةٍ اَجَلٌ ۚ— فَاِذَا جَآءَ اَجَلُهُمْ لَا یَسْتَاْخِرُوْنَ سَاعَةً وَّلَا یَسْتَقْدِمُوْنَ ۟

ಪ್ರತಿಯೊಂದು ಸಮುದಾಯಕ್ಕೂ (ಮರಣದ) ಒಂದು ನಿಶ್ಚಿತ ಅವಧಿಯಿದೆ. ಹಾಗೆ ಅವರ ನಿಶ್ಚಿತಾವಧಿಯು ಬಂದರೆ ಅವರಿಗೆ ಒಂದು ಗಳಿಗೆಯಷ್ಟು ಹಿಂದಾಗಲಿಕ್ಕಾಗಲೀ, ಮುಂದಕ್ಕಾಗಲೀ ಸರಿಯಲು ಸಾಧ್ಯವಿಲ್ಲ. info
التفاسير:

external-link copy
35 : 7

یٰبَنِیْۤ اٰدَمَ اِمَّا یَاْتِیَنَّكُمْ رُسُلٌ مِّنْكُمْ یَقُصُّوْنَ عَلَیْكُمْ اٰیٰتِیْ ۙ— فَمَنِ اتَّقٰی وَاَصْلَحَ فَلَا خَوْفٌ عَلَیْهِمْ وَلَا هُمْ یَحْزَنُوْنَ ۟

ಓ ಆದಮ್ ಸಂತತಿಗಳೇ, ನಿಮ್ಮ ಬಳಿಗೆ ನನ್ನ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಾ ನಿಮ್ಮಿಂದಲೇ ಆದ ಸಂದೇಶವಾಹಕರು ಬಂದರೆ ಯಾರು ಭಯಭಕ್ತಿ ಪಾಲಿಸುತ್ತಾನೋ ಮತ್ತು ಸುಧಾರಣೆ ಮಾಡಿಕೊಳ್ಳುತ್ತಾನೋ ಅವರಿಗೆ ಯಾವುದೇ ಭಯವಿರುವುದಿಲ್ಲ. ಮತ್ತು ಅವರು ದುಃಖಿತರಾಗಲಾರರು. info
التفاسير:

external-link copy
36 : 7

وَالَّذِیْنَ كَذَّبُوْا بِاٰیٰتِنَا وَاسْتَكْبَرُوْا عَنْهَاۤ اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟

ಮತ್ತು ಯಾರು ನಮ್ಮ ಸೂಕ್ತಿ (ನಿಯಮ) ಗಳನ್ನು ನಿಷೇಧಿಸುತ್ತಾರೋ ಮತ್ತು ಅದರ (ಅನುಸರಣೆ ಮಾಡುವುದರ) ವಿರುದ್ಧ ಅಹಂಕಾರ ತೋರಿಸುತ್ತಾರೋ ಅವರು ನರಕವಾಸಿಗಳು. ಮತ್ತು ಅವರು ಅದರಲ್ಲಿ ಶಾಶ್ವತವಾಗಿರುವರು. info
التفاسير:

external-link copy
37 : 7

فَمَنْ اَظْلَمُ مِمَّنِ افْتَرٰی عَلَی اللّٰهِ كَذِبًا اَوْ كَذَّبَ بِاٰیٰتِهٖ ؕ— اُولٰٓىِٕكَ یَنَالُهُمْ نَصِیْبُهُمْ مِّنَ الْكِتٰبِ ؕ— حَتّٰۤی اِذَا جَآءَتْهُمْ رُسُلُنَا یَتَوَفَّوْنَهُمْ ۙ— قَالُوْۤا اَیْنَ مَا كُنْتُمْ تَدْعُوْنَ مِنْ دُوْنِ اللّٰهِ ؕ— قَالُوْا ضَلُّوْا عَنَّا وَشَهِدُوْا عَلٰۤی اَنْفُسِهِمْ اَنَّهُمْ كَانُوْا كٰفِرِیْنَ ۟

ಅಲ್ಲಾಹನ ಮೇಲೆ ಸುಳ್ಳನ್ನು ಹೆಣೆದವನಿಗಿಂತ ಅಥವಾ ಅವನ ದೃಷ್ಟಾಂತಗಳನ್ನು ಸುಳ್ಳೆಂದು ವಾದಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅವರ ವಿಧಿಯಲ್ಲಿ ಬಂದಿರುವ ತಮ್ಮ ಪಾಲನ್ನು ಇಹದಲ್ಲಿ ಪಡೆದುಕೊಳ್ಳಲಿರುವರು. ಕೊನೆಗೆ ಅವರ ಪ್ರಾಣವನ್ನು ವಶಪಡಿಸಿಕೊಳ್ಳಲು ನಮ್ಮ ದೂತರು ಬರುವಾಗ ಹೇಳುವರು: ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿದ್ದವರು ಎಲ್ಲಿರುವರು? ಅವರು ಹೇಳುವರು: ಅವರು ನಮ್ಮಿಂದ ಕಣ್ಮರೆಯಾಗಿದ್ದಾರೆ ಮತ್ತು ತಾವು ಸತ್ಯನಿಷೇಧಿಗಳಾಗಿದ್ದೇವೆಂದು ಅವರು ಸಾಕ್ಷö್ಯವಹಿಸುವರು. info
التفاسير: