የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ

የገፅ ቁጥር:close

external-link copy
89 : 10

قَالَ قَدْ اُجِیْبَتْ دَّعْوَتُكُمَا فَاسْتَقِیْمَا وَلَا تَتَّبِعٰٓنِّ سَبِیْلَ الَّذِیْنَ لَا یَعْلَمُوْنَ ۟

ಅಲ್ಲಾಹನು ಹೇಳಿದನು; ನಿಮ್ಮಿಬ್ಬರ ಪ್ರಾರ್ಥನೆಯನ್ನು ಸ್ವೀಕರಿಸಲಾಗಿದೆ. ಆದುದರಿಂದ ನೀವಿಬ್ಬರೂ ಸ್ಥಿರತೆಯಿಂದಿರಿ ಹಾಗೂ ಅಜ್ಞಾನಿಗಳ ಮಾರ್ಗವನ್ನು ಅನುಸರಿಸಬೇಡಿರಿ. info
التفاسير:

external-link copy
90 : 10

وَجٰوَزْنَا بِبَنِیْۤ اِسْرَآءِیْلَ الْبَحْرَ فَاَتْبَعَهُمْ فِرْعَوْنُ وَجُنُوْدُهٗ بَغْیًا وَّعَدْوًا ؕ— حَتّٰۤی اِذَاۤ اَدْرَكَهُ الْغَرَقُ قَالَ اٰمَنْتُ اَنَّهٗ لَاۤ اِلٰهَ اِلَّا الَّذِیْۤ اٰمَنَتْ بِهٖ بَنُوْۤا اِسْرَآءِیْلَ وَاَنَا مِنَ الْمُسْلِمِیْنَ ۟

ಮತ್ತು ನಾವು ಇಸ್ರಾಯೀಲ್ ಸಂತತಿಗಳನ್ನು ಸಮುದ್ರ ದಾಟಿಸಿದೆವು. ನಂತರ ಫಿರ್‌ಔನ್ ಮತ್ತು ಅವನ ಸೈನ್ಯವು ಧಿಕ್ಕಾರ ಹಾಗು ವಿದ್ವೇಷದಿಂದ ಅವರನ್ನು ಬೆನ್ನಟ್ಟಿದರು, ಕೊನೆಗೆ ಅವನು ಮುಳುಗತೊಡಗಿದಾಗ ಹೇಳಿದನು : ಇಸ್ರಾಯೀಲ್ ಸಂತತಿಗಳು ವಿಶ್ವಾಸವಿರಿಸಿದವನ ಮೇಲೆ ನಾನೂ ವಿಶ್ವಾಸವಿರಿಸಿದೆನು. ಅವನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ನಾನು ಶರಣಾಗುವರಲ್ಲಾಗುವೆನು, info
التفاسير:

external-link copy
91 : 10

آٰلْـٰٔنَ وَقَدْ عَصَیْتَ قَبْلُ وَكُنْتَ مِنَ الْمُفْسِدِیْنَ ۟

(ಹೇಳಲಾಯಿತು) ಈಗ ನೀನು ವಿಶ್ವಾಸವಿಡುವೆಯಾ? ಇದಕ್ಕಿಂತ ಮೊದಲು ನೀನು ಧಿಕ್ಕಾರ ತೋರಿಸುತ್ತಿದ್ದೆ ಮತ್ತು ನೀನು ಕ್ಷೆÆÃಭೆ ಹರಡುವವರಲ್ಲಿ ಸೇರಿದ್ದೆ? info
التفاسير:

external-link copy
92 : 10

فَالْیَوْمَ نُنَجِّیْكَ بِبَدَنِكَ لِتَكُوْنَ لِمَنْ خَلْفَكَ اٰیَةً ؕ— وَاِنَّ كَثِیْرًا مِّنَ النَّاسِ عَنْ اٰیٰتِنَا لَغٰفِلُوْنَ ۟۠

ನಾವು ಇಂದು ನೀನು ನಿನ್ನ ನಂತರದವರಿಗೆ ಪಾಠವಾಗಲೆಂದು ನಿನ್ನ ಶವವನ್ನು (ಮಾತ್ರ) ರಕ್ಷಿಸುವೆವು, ವಾಸ್ತವವೇನೆಂದರೆ ಹೆಚ್ಚಿನ ಜನರು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷö್ಯರಾಗಿದ್ದಾರೆ. info
التفاسير:

external-link copy
93 : 10

وَلَقَدْ بَوَّاْنَا بَنِیْۤ اِسْرَآءِیْلَ مُبَوَّاَ صِدْقٍ وَّرَزَقْنٰهُمْ مِّنَ الطَّیِّبٰتِ ۚ— فَمَا اخْتَلَفُوْا حَتّٰی جَآءَهُمُ الْعِلْمُ ؕ— اِنَّ رَبَّكَ یَقْضِیْ بَیْنَهُمْ یَوْمَ الْقِیٰمَةِ فِیْمَا كَانُوْا فِیْهِ یَخْتَلِفُوْنَ ۟

ಮತ್ತು ನಿಸ್ಸಂದೇಹವಾಗಿಯೂ ನಾವು ಇಸ್ರಾಯೀಲ್ ಸಂತತಿಗಳಿಗೆ ಯೋಗ್ಯವಾದ ನೆಲೆಯನ್ನು ವಾಸಿಸಲು ನೀಡಿದೆವು ಮತ್ತು ಪರಿಶುದ್ಧ ವಸ್ತುಗಳಿಂದ ಆಹಾರ ಕೊಟ್ಟೆವು. ಆದರೆ ಅವರು ತಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ಭಿನ್ನಾಭಿಪ್ರಾಯಕ್ಕೆ ತುತ್ತಾದರು. ಖಂಡಿತವಾಗಿಯೂ ನಿಮ್ಮ ಪ್ರಭುವು ಪುನರುತ್ಥಾನ ದಿನದಂದು ಅವರು ಭಿನ್ನತೆ ಹೊಂದಿರುವ ವಿಷಯಗಳಲ್ಲಿ ಅವರ ನಡುವೆ ತೀರ್ಪು ನೀಡಲಿರುವನು. info
التفاسير:

external-link copy
94 : 10

فَاِنْ كُنْتَ فِیْ شَكٍّ مِّمَّاۤ اَنْزَلْنَاۤ اِلَیْكَ فَسْـَٔلِ الَّذِیْنَ یَقْرَءُوْنَ الْكِتٰبَ مِنْ قَبْلِكَ ۚ— لَقَدْ جَآءَكَ الْحَقُّ مِنْ رَّبِّكَ فَلَا تَكُوْنَنَّ مِنَ الْمُمْتَرِیْنَ ۟ۙ

ಆದ್ದರಿಂದ ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ಗ್ರಂಥದಲ್ಲಿ ನಿಮಗೆ ಸಂದೇಹವಿದ್ದರೆ ನಿಮಗಿಂತ ಮುಂಚೆ ಗ್ರಂಥ ಓದುತ್ತಿದ್ದವರೊಡನೆ ವಿಚಾರಿಸಿನೋಡಿರಿ; ನಿಶ್ಚಯವಾಗಿಯು ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ಸತ್ಯವು ಬಂದಿರುತ್ತದೆ. ಆದ್ದರಿಂದ ನೀವು ಎಂದಿಗೂ ಸಂಶಯಗ್ರಸ್ಥರಲ್ಲಾಗಬಾರದು. info
التفاسير:

external-link copy
95 : 10

وَلَا تَكُوْنَنَّ مِنَ الَّذِیْنَ كَذَّبُوْا بِاٰیٰتِ اللّٰهِ فَتَكُوْنَ مِنَ الْخٰسِرِیْنَ ۟

ಮತ್ತು ಅಲ್ಲಾಹನ ದೃಷ್ಟಾಂತಗಳನ್ನು ಸುಳ್ಳಾಗಿಸಿದವರೊಂದಿಗೆ ಸೇರಬೇಡಿರಿ. ಅನ್ಯಥಾ ನೀವು ನಷ್ಟಹೊಂದಿದವರಲ್ಲಾಗುವಿರಿ. info
التفاسير:

external-link copy
96 : 10

اِنَّ الَّذِیْنَ حَقَّتْ عَلَیْهِمْ كَلِمَتُ رَبِّكَ لَا یُؤْمِنُوْنَ ۟ۙ

ಖಂಡಿತವಾಗಿಯೂ ಯಾರ ಮೇಲೆ ನಿಮ್ಮ ಪ್ರಭುವಿನ ವಚನವೂ ನಿಜವಾಗಿಬಿಟ್ಟಿತೊ ಅವರು ವಿಶ್ವಾಸವಿರಿಸಲಾರರು, info
التفاسير:

external-link copy
97 : 10

وَلَوْ جَآءَتْهُمْ كُلُّ اٰیَةٍ حَتّٰی یَرَوُا الْعَذَابَ الْاَلِیْمَ ۟

ಮತ್ತು ಅವರೆಡೆಗೆ ಸಕಲ ದೃಷ್ಟಾಂತವೂ ಬಂದುಬಿಟ್ಟರೂ ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವವರೆಗೂ (ವಿಶ್ವಾಸವಿಡಲಾರರು). info
التفاسير: